ಅಭಿಪ್ರಾಯ / ಸಲಹೆಗಳು

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಪ್ರಾಮುಖ್ಯತೆ

ಮುನ್ನುಡಿ

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ದೇಶದ ಎಲ್ಲಾ ಭಾಗಗಳಲ್ಲಿ ಪ್ರತಿ ವರ್ಷವೂ ಡಿಸೆಂಬರ್ 07 ರಂದು ಆಚರಿಸಲಾಗುತ್ತದೆ. ಈ ದಿನ ಸಶಸ್ತ್ರ ಪಡೆಗಳ ಧ್ವಜವನ್ನು ಬಿಡುಗಡೆ ಮಾಡಲಾಗುತ್ತದೆ ಹಾಗೂ ರಕ್ಷಣಾ ಪಡೆಗಳು ದೇಶದ ಗಡಿಯನ್ನು ಹಗಲಿರುಳು ಧೈರ್ಯ ಮತ್ತು ಸಾಹಸಗಳಿಂದ ರಕ್ಷಿಸುತ್ತಿರುವುದಕ್ಕೆ ನಮ್ಮ ಕೃತಜ್ಞತೆಯನ್ನು ಸಲ್ಲಿಸಲು ಹಾಗೂ ಸಹಾನುಭೂತಿ ಮತ್ತು ಬೆಂಬಲವನ್ನು ಅವರಿಗೆ ವ್ಯಕ್ತಪಡಿಸಲು ಈ ಧ್ವಜ ದಿನಾಚರಣೆಯು ಒಂದು ಸದವಕಾಶವನ್ನು ನೀಡುತ್ತದೆ. ನಮ್ಮ ವೀರ ಯೋಧರಿಗೆ ಕೃತಜ್ಞತೆ ಸಲ್ಲಿಸಿ ಪ್ರೋತ್ಸಾಹಿಸಲು ಹಾಗೂ ಅವರ ಕುಟುಂಬಗಳಿಗೆ ಬೆಂಬಲ ಒದಗಿಸಲು ಸಶಸ್ತ್ರ ಪಡೆಗಳ ಧ್ವಜದÀ ನಿಧಿಗೆ ಉದಾರ ಕಾಣಿಕೆ ನೀಡಲು ಈ ದಿನಾಚರಣೆಯು ಒಂದು ಅತ್ಯುತ್ತಮ ವೇದಿಕೆಯಾಗಿದೆ.

ಈ ನಿಧಿಯನ್ನು, ಕೇಂದ್ರ ಸೈನಿಕ ಮಂಡಳಿ ಮತ್ತು ರಾಜ್ಯ ಸೈನಿಕ ಮಂಡಳಿಗಳು ಯುದ್ಧ ಸಂತಸ್ತ್ರರಿಗೆ, ಮಾಜಿ ಸೈನಿಕರು ಮತ್ತು ಗಾಯಗೊಂಡ ವೀರ ಯೋಧರು ಹಾಗೂ ಅವರ ಅವಲಂಬಿತರ ಸಲುವಾಗಿ ಹಮ್ಮಿ ಕೊಂಡ ವಿವಿಧ ಕಲ್ಯಾಣ ಮತ್ತು ಕ್ಷೇಮಾಭಿವೃದ್ದಿ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತದೆ.

ಬಹಳಷ್ಟು ವೀರ ಯೋಧರು ದೇಶ ಸೇವೆಯಲ್ಲಿ ಅತ್ಯುಚ್ಛ ಬಲಿದಾನ ನೀಡಿ ಅಮರರಾಗಿರುತ್ತಾರೆ. ಹಾಗೆಯೇ, ಹಾಲಿ ನಡೆಯುತ್ತಿರುವ ಅತಂಕವಾದಿಗಳ ಸಂರ್ಘಣೆಯಲ್ಲಿ ಮತ್ತು ಈ ಹಿಂದಿನ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಅನೇಕ ಸೈನಿಕರು ತಮ್ಮ ಪ್ರಾಣವನ್ನೇ ಕಳೆದುಕೊಂಡು ಕೆಲವು ಕುಟುಂಬಗಳನ್ನು ಅಗಲಿರುತ್ತಾರೆ. ಈ ಧ್ವಜ ದಿನಾಚರಣೆಯು ಅಮರ ಯೋಧರ, ಅಂಗವಿಕಲಗೊಂಡ ಯೋಧರ ಕುರಿತು ನಮ್ಮ ಜವಾಬ್ದಾರಿಯನ್ನು ನೆನಪಿಸಿ ಅವರ ಕುಟುಂಬಗಳಿಗೆ ಬೆಂಬಲ ಒದಗಿಸಲು ಸದಾವಕಾಶವಾಗಿರುತ್ತದೆ. ಈ ಧ್ವಜ ದಿನವು ಪ್ರತಿ ವರ್ಷವೂ ನಮ್ಮ ರಾಷ್ಟ್ರದ ಒಂದು ಮಹತ್ವದ ದಿನವಾಗಿರುತ್ತದೆ.

ಐತಿಹಾಸಿಕ ಹಿನ್ನಲೆ

ಸ್ವಾತಂತ್ರ್ರ ಪೂರ್ವದಲ್ಲಿ ಮಾಜಿ ಸೈನಿಕರ ಕಲ್ಯಾಣ ಕಾರ್ಯಕ್ರಮಗಳಿಗೋಸ್ಕರ ಪ್ರತಿ ವರ್ಷವೂ ನವೆಂಬರ್ 11 ರಂದು ಸ್ಮರಣ ದಿನವನ್ನಾಗಿ ಆಚರಿಸಿ ದೇಣಿಗೆಗಳನ್ನು ಸಂಗ್ರಹಿಸಲಾಗುತ್ತಿತ್ತು. ಒಂದನೆಯ ವಿಶ್ವ ಮಹಾ ಯುದ್ಧದಲ್ಲಿ ಮಡಿದ ಯೋಧರನ್ನು ತೆರೆÀದ ಸ್ಥಳದಲ್ಲಿ ಸಮಾಧಿ ಮಾಡಿ ಅದರ ಮೇಲೆ ಪಾಪ್ಪಿ ಹೂವುಗಳ ಗಿಡಗಳನ್ನು ಬೆಳಸುತ್ತಿದ್ದರು. ಈ ಸಾಂಕೇತಿಕ ಸ್ಮರಣ ದಿನದಂದು ಕಾಗದದ ಪಾಪ್ಪಿ ಹೂವುಗಳನ್ನು ಸಾರ್ವಜನಿಕರಿಗೆ ಈ ದೇಣಿಗೆಗಾಗಿ ವಿತರಣೆ ಮಾಡಲಾಗುತಿತ್ತು. ಆದರೆ ಇದು ಸಮಂಜಸವಲ್ಲವೆಂದು ಸ್ವಾತಂತ್ರದ ನಂತರ ಜುಲೈ 1948ರಲ್ಲಿ ಸದನದ ರಕ್ಷಣಾ ¸ಮಿುತಿಯು, ಇಂತಹ ದೇಣಿಗೆಯನ್ನು ಒಂದು ನಿರ್ಧಿಷ್ಠ ದಿನಾಂಕದಂದು ಸಂಗ್ರಹಿಸುವ ತೀರ್ಮಾನವನ್ನು ಕೈಗೊಂಡಿತು.


ರಕ್ಷಣಾ ಮಂತ್ರಾಲಯದ ಮಂಡಳಿಯು ದಿನಾಂಕ 28 ಆಗಸ್ಟ್ 1949ರಂದು ಧ್ವಜ ದಿನಾಚರಣೆಯನ್ನು ಪ್ರತಿ ವರ್ಷವೂ ಡಿಸೆಂಬರ್ 07 ರಂದು ದೇಶದಾದ್ಯಂತ ಆಚರಿಸುವ ನಿರ್ಣಯವನ್ನು ಕೈಗೊಂಡಿತು. ಈ ದಿನದಂದು ಸಾರ್ವಜನಿಕರಿಗೆ ಸಶಸ್ತ್ರ ಪಡೆಗಳ ಧ್ವಜಗಳನ್ನು ಅಂಗಿಯ ಎದೆಭಾಗದಲ್ಲಿ ಹಾಗೂ ವಾಹನಗಳ ಮೇಲೆ ಅಂಟಿಸಿಕೊಂಡು ಸೇನಾನಿಗಳಿಗೆ ಗೌÀರವದ್ಯೋತಕವಾಗಿ ಪ್ರದಶರ್Àನಗೊಳ್ಳಲಾರಂಭಿಸಲಾಯಿತು. ಈ ದಿನವನ್ನು ಸ್ವಯಂ ಪ್ರೇರಣೆಯ ದೇಣಿಗೆಯನ್ನು ಧ್ವಜ ನಿಧಿಗೆ ನೀಡಿ ಯೋಧರಿಗೆ ಬೆಂಬಲ ವ್ಯಕ್ತಪಡಿಸಲು ಮೀಸಲಿಡಲಾಗಿದೆ.

ಧ್ವಜ ದಿನಾಚರಣೆ

ಸಶಸ್ತ್ರ ಸೇನಾ ಪಡೆಗಳಿಗೆ ಗೌರವ ತೋರಿಸುವ ನಿಟ್ಟಿನಲ್ಲಿ, ಸಾರ್ವಜನಿಕರನ್ನು ಆಕರ್ಷಿಸಲು ವಿವಿಧ ರೀತಿಯ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಾ ಬರಲಾಗಿದೆ. ಇದರ ಮಹತ್ವದ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ತಂತ್ರಜ್ಞಾನ, ಮುದ್ರಣ, ಮಾಧ್ಯಮಗಳನ್ನು ಬಳಸಿಕೊಳ್ಳುವುದಲ್ಲದೆ ಕೆಲವು ಪ್ರದೇಶಗಳಲ್ಲಿ ಹಾಗೂ ಸಶಸ್ತ್ರ ಪಡೆಗಳ ನೆಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ, ಮನೋರಂಜನಾ ಉತ್ಸವ ಹಾಗೂ ಪಥಸಂಚಲನ ಇತ್ಯಾದಿಗಳನ್ನು ಏರ್ಪಡಿಸಲಾಗುತ್ತಾ ಬರಲಾಗಿದೆ.

ಗುರುತಿನ ಧ್ವಜ, ವಾಹನ ಧ್ವಜ ಹೀಗೆ ಕೆಂಪು, ಅಚ್ಚು ನೀಲಿ ಮತ್ತು ಹಗುರ ಬಣ್ಣದಲ್ಲಿ ಸೇನೆಯ ಮೂರೂ ಪಡೆಗಳನ್ನು ಪ್ರತಿನಿಧಿಸುವ ಚಿನ್ಹೆಯ ಧ್ವಜಗಳನ್ನು ಕೇಂದ್ರಿಯ ಹಾಗೂ ರಾಜ್ಯ ಮಂಡಳಿಗಳಿಂದ ಎಲ್ಲಾ ರಾಜ್ಯಗಳಲ್ಲಿ ಈ ದಿನದಂದು ವಿತರಿಸಲಾಗುತ್ತದೆ.

ರಾಜ್ಯ ಸರ್ಕಾರ.

ಈ ನಿಧಿಯನ್ನು ರಾಜ್ಯ ಸರ್ಕಾರವು ಅವರವರ ರಾಜ್ಯ ಸೈನಿಕ ಮಂಡಳಿಗಳ ಮಟ್ಟದಲ್ಲಿ ಹಂಚಿಕೆ ಮಾಡುತ್ತವೆ. ಇದನ್ನು ಆರ್ಥಿಕ ಧನ ಸಹಾಯವಾಗಿ ಸಂಕಷ್ಟದಲ್ಲಿರುವ ಮಾಜಿ ಸೈನಿಕರಿಗೆ ನೀಡುವುದಲ್ಲದೇ, ಯುದ್ಧ/ಯುದ್ಧದಂತಹ ಕಾರ್ಯಾಚರಣೆಯಲ್ಲಿ ವೀರ ಮರಣ ಹೊಂದಿದ ಸೈನಿಕರ ಮತ್ತು ಗಾಯಗೊಂಡ ಯೋಧರ, ಮಾಜಿ ಸೈನಿಕರ ಹಾಗೂ ಅವರ ಅವಲಂಬಿತರ ವಿವಿಧ ಕಲ್ಯಾಣ ಹಾಗೂ ಕ್ಷೇಮಾಭಿವೃದ್ದಿ ಕಾರ್ಯಕ್ರಮಗಳಿಗಾಗಿ ವಿತರಿಸಲಾಗುತ್ತದೆ.

ತೆರಿಗೆ ವಿನಾಯಿತಿ.

ಭಾರತ ಸರ್ಕಾರ ಆರ್ಥಿಕ ಇಲಾಖೆ (ರೆವೆನ್ಯೂ ಡಿವಿಸನ್) ರ ಸುತ್ತೋಲೆ/ಸಂಖ್ಯೆ 69(12)/Iಖಿ/54 ದಿನಾಂಕ 06-03-1954 ರನ್ವಯ ಹಾಗೂ ಅಧಿಸೂಚನೆ ಸಂಖ್ಯೆ 1536(ಈಓ197/105176-II(ಂ-1) ದಿನಾಂಕ 25-10-1976 ರನ್ವಯ, ಧ್ವಜ ನಿಧಿಗೆ ನೀಡಿದ ಮೊತ್ತಗಳಿಗೆ ತೆರಿಗೆ ವಿನಾಯಿತಿ ಇರುತ್ತದೆ.

ಇತ್ತೀಚಿನ ನವೀಕರಣ​ : 11-11-2020 04:53 PM ಅನುಮೋದಕರು: M S Lolaksha


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸೈನಿಕ ಕಲ್ಯಾಣ ಮತ್ತು ಪುನವ೯ಸತಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080