ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಸೈನಿಕ ಕಲ್ಯಾಣ ಮತ್ತು ಪುನವ೯ಸತಿ ಇಲಾಖೆಯು ಒಳಾಡಳಿತ ಇಲಾಖೆಯ ಅಡಿಯಲ್ಲಿ ಕಾಯ೯ ನಿವ೯ಹಿಸುತ್ತಿದೆ. ಈ ಇಲಾಖೆಯು ಯುದ್ಧ / ಯುದ್ಧದಂತಹ ಕಾಯಾ೯ಚರಣೆಯಲ್ಲಿ ಗಾಯಗೊಂಡ ಯೋಧರ, ಮಡಿದ ಯೋಧರ ಅವಲಂಬಿತರ, ಮಾಜಿ ಸೈನಿಕರ ಮತ್ತು ಅವರ ಅವಲಂಬಿತರ ಕಲ್ಯಾಣ ಮತ್ತು ಪುನವ೯ಸತಿಗಾಗಿ ರಾಜ್ಯ ಮತ್ತು ಕೇಂದ್ರ ಸಕಾ೯ರಗಳ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅಲ್ಲದೇ, ಸೇವೆಯಲ್ಲಿರುವ ಯೋಧರ ಕುಂದುಕೊರತೆಗಳನ್ನೂ ಸಹಾ ಪರಿಹರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಇಲಾಖೆಯು ಬೆಂಗಳೂರಿನಲ್ಲಿ ನಿದೇ೯ಶನಾಲಯವನ್ನು ಹೊಂದಿದ್ದು, ೧೩ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಕಾಯಾ೯ಲಯಗಳನ್ನು ಹೊಂದಿದೆ.

ಯುದ್ಧ / ಯುದ್ಧದಂತಹ ಕಾಯಾ೯ಚರಣೆಯಲ್ಲಿ ಗಾಯಗೊಂಡ ಯೋಧರ, ಮಡಿದ ಯೋಧರ ಅವಲಂಬಿತರ, ಮಾಜಿ ಸೈನಿಕರ ಮತ್ತು ಅವರ ಅವಲಂಬಿತರ ಕುರಿತ ಯೋಜನೆಗಳ ಸಲಹೆಗಾಗಿ ಸೈನಿಕ ಮಂಡಳಿಗಳು ಕಾಯ೯ ನಿವ೯ಹಿಸುತ್ತಿವೆ.


ಜಿಲ್ಲಾ ಸೈನಿಕ ಮಂಡಳಿ :

 

ಜಿಲ್ಲಾ ಮಟ್ಟದಲ್ಲಿ ಕಾಯ೯ ನಿವ೯ಹಿಸುತ್ತಿದ್ದು, ಜಿಲ್ಲಾಧಿಕಾರಿಗಳು ಇದರ ಅಧ್ಯಕ್ಷರಾಗಿರುತ್ತಾರೆ. ಜಿಲ್ಲೆಯ ಒಬ್ಬರು ಹಿರಿಯ ಮಾಜಿ ಸೇನಾಧಿಕಾರಿಗಳು ಉಪಾಧ್ಯಕ್ಷರಾಗಿದ್ದು, ಇಲಾಖೆಯ ಜಿಲ್ಲಾ ಕಾಯಾ೯ಲಯದ ಉಪ / ಜಂಟಿ ನಿದೇ೯ಶಕರು ಕಾಯ೯ದಶಿ೯ಗಳಾಗಿರುತ್ತಾರೆ. ಜಿಲ್ಲೆಯ ಹಿರಿಯ ಅಧಿಕಾರಿಗಳು ಇದರ ಅಧಿಕಾರೇತರ ಸದಸ್ಯರುಗಳಾಗಿದ್ದು, ಪ್ರತಿ ಜಿಲ್ಲೆಯಿಂದ ಇಬ್ಬರನ್ನು ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ. ಇದರಲ್ಲಿ ಒಬ್ಬರು ಮಾಜಿಸೈನಿಕರಾಗಿರುತ್ತಾರೆ. ಅಲ್ಲದೆ, ಜಿಲ್ಲೆಯಲ್ಲಿರುವ ಗೌರವಾನ್ವಿತ ವ್ಯಕ್ತಿಗಳನ್ನು ಮತ್ತು ಉದ್ಯಮಿಗಳನ್ನು ಸಹಾ ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಬಹುದಾಗಿರುತ್ತದೆ.

 

ರಾಜ್ಯ ಸೈನಿಕ ಮಂಡಳಿ :

 

ರಾಜ್ಯದ ಸನ್ಮಾನ್ಯ ಮುಖ್ಯ ಮಂತ್ರಿಗಳು ರಾಜ್ಯ ಸೈನಿಕ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ. ರಾಜ್ಯ ಸೈನಿಕ ಮಂಡಳಿಯ ಸಂಪೂಣ೯ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿರಿ

ಇತ್ತೀಚಿನ ನವೀಕರಣ​ : 09-11-2020 01:41 PM ಅನುಮೋದಕರು: M S Lolaksha


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸೈನಿಕ ಕಲ್ಯಾಣ ಮತ್ತು ಪುನವ೯ಸತಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080